ಪತ್ರಿಕಾರಂಗದಲ್ಲಿ ಹಾಗೂ ಸಮಾಜಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತ ಮನೋಹರ್ ಬಳಂಜರಿಗೆ 2026 ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದ ಸಲುವಾಗಿ ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ನ.16 ರಂದು ಅಭಿನಂದನಾ ಕಾರ್ಯಕ್ರಮವು ಹುಣ್ಸೆಕಟ್ಟೆ ಸಹಕಾರಿ ಸಂಘದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರಮಾದೇವಿ ಸನ್ಮಾನ ನೆರವೇರಿಸಿದರು.

ಕಾರ್ಯದರ್ಶಿ ಶ್ರೀಮತಿ ಸುಜಾತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು,ಹಾಲು ಪರೀಕ್ಷಕಿ ಶ್ರೀಮತಿ ಶೋಭಾ ವಂದಿಸಿದರು.ಉಪಾಧ್ಯಕ್ಷೆ, ಹಾಗೂ ನಿರ್ದೇಶಕರು ಭಾಗಿಯಾಗಿದ್ದರು.