ಕೊಕ್ಕಡ: ಇತಿಹಾಸ ಪ್ರಸಿದ್ಧ ಬಯಲು ಆಲಯವೆಂದೇ ಹೆಸರುವಾಸಿಯಾದ ಸೌತಡ್ಕ ಶ್ರೀ ಮಹಾಗಣಪತಿ ಆಲಯಕ್ಕೆ ಕನ್ನಡ ಚಲನಚಿತ್ರ ನಟ ಜಗ್ಗೇಶ್ ನ.12 ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಲೋಕೇಶ್ವರಿ ವಿನಯಚಂದ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಉಪಸ್ಥಿತರಿದ್ದರು








